ಕೀರ್ತನೆ - 872     
 
ಹರಿಕಥಾಶ್ರವಣಕ್ಕೆ ಮನವಿಟ್ಟ ಪ್ರೌಢ | ಅರುವತ್ತು ಗಳಿಗೆಗಳ ವ್ಯರ್ಥ ಹೋಗಾಡ | ಪರಮ ಪದವಿಯನೈದುವನು ಅವನು ಗಾಢ | ನರಕದಾಬಟ್ಟೆ ದೂರದಲೊಮ್ಮೆ ನೋಡ | ಪುರಂದರವಿಠಲನಂಘ್ರಿಯನು ಗಾಢ-| ತರಲಪ್ಪುವ ಮೈಯಮೆರೆದು ತಾನಾಡ