ಕೀರ್ತನೆ - 870     
 
ನಿನ್ನಂಥ ತಂದೆ ಎನಗುಂಟು ನಿನಗಿಲ್ಲ ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ ನಿನ್ನಂಥ ದೊರೆಯೊಬ್ಬ ಎನಗುಂಟು ನಿನಗಿಲ್ಲ ನೀನೆ ಪರದೇಶಿ ನಾನು ಸ್ವದೇಶಿ ನಿನ್ನ ಅರಸಿ ಲಕ್ಷ್ಮಿ ಎನಗೆ ತಾಯಿಯುಂಟು ಎನಗಿದ್ದ ತಾಯ್ತಂದೆ ನಿನಗಾರಯ್ಯ ಪುರಂದರವಿಠಲ.