ಕೀರ್ತನೆ - 868     
 
ಸೂಸಲಾಸೆಗೆ ಹೋಗಿ ಬಡಿಗಲ್ಲಿನೊಳು ಸಿಕ್ಕಿದ ಮೂಷಕನ ಪರಿಯಂತಾದೆನೊ ಎಲೆ ದೇವ ಹೇಸಿ(ಕೆ) ವಿಷಯಂಗಳಿಗೆ ಎರಗುತಿದೆ ಎನ್ನ ಮನ ಗಾಸಿಯಾದೆನೊ ಹೃಷಿಕೇಶ ನೀ ಸಲಹಯ್ಯ ವಾಸವಾರ್ಚಿತ ಸಿರಿ ಪುರಂದರವಿಠಲ ನಿನ್ನ ದಾಸರ ಸಂಗದಲಿ ಇರಿಸೆನ್ನ ಅನವರತ [ಕ್ಷೇಶವ ಕಳೆಯಯ್ಯಾ ದೊರೆಯೆ]