ಕೀರ್ತನೆ - 867     
 
ಕ್ರಿಮಿ ಕೀಟನಾಗಿ ಹುಟ್ಟದಂದು ಹರಿ ಶರಣೆಂತೆನಲುಂಟೆ ಹರಿ ಶರಣನಾಗಿ ಹುಟ್ಟಿದಂದು ಹರಿ ಶರಣಿಂತೆನಲುಂಟೆ ಕತ್ತೆ ಕರಡಿಯಾಗೆ ಹುಟ್ಟಿದಂದು ಹರಿ ಶರಣೆಂತೆನಲುಂಟೆ ಹಂದಿ ಶುನಕನಾಗಿ ಹುಟ್ಟದಂದು ಹರಿ ಶರಣೆಂತೆನಲುಂಟೆ ಮರೆತೀಯೆ ಮಾನವ ನಿನ್ನ ಹಿಂದಿನ ಭವಗಳ ನೊಂದು ಮಾನುಷ ದೇಹ ಬಂದಿತೋ ನಿನಗೀಗ ಬೇಗ ನೆನೆಯಲೊ ಪುರಂದರ ವಿಠಲರಾಯನ.