ಕೀರ್ತನೆ - 866     
 
ಕ್ರಿಮಿಕೀಟಕನಾಗಿ ಹುಟ್ಟಿದಂದು ನಾನು ಹರಿಶರಣಂದೆನಲುಂಟೆ ಹಕ್ಕಿ ಹರಿಣಿಯಾಗೆ ಹುಟ್ಟಿದಂದು ನಾನು ಹರಿಶರಣೆಂದೆನಲುಂಟೆ ಹಂದಿ-ಸೊನಗನಾಗಿ ಹುಟ್ಟಿದಂದು ನಾನು ಹರಿಶರಣೆಂದೆನಲುಂಟೆ ಮರೆದೆ ಮಾನವ ನಿನ್ನ ಹಿಂದಿನ ಭವಗಳನಂದು ಮಾನುಷ ದೇಹ ಬಂದಿತೊ ನಿನಗೀಗ ನೆನೆಯಲೊ ಬೇಗ ಪುರಂದರವಿಠಲನ.