ಕೀರ್ತನೆ - 862     
 
ಮರ್ಕಟನ ಕೈನೂಲ ಕುಕ್ಕಡಿಯ ತೆರನಂತೆ ಸಿಕ್ಕಿಕೊಂಡು ಕಾಮಕ್ರೋಧ ಮೋಹಗಳೆನ್ನ ಹಿಕ್ಕಿ ಹೀರುತಲಿವೆ ಏಕೆ ನೋಡುತಲಿರುವೆ? ಅಕ್ಕಟಕ್ಕಟಾ! ನಿನ್ನ ದಾಸನಲ್ಲವೆ ನಾನು? ಸಿಕ್ಕ ಬಿಡಿಸಿ ನಿನ್ನ ಭಕ್ತಿಯ ತೋರಿಸೊ ಪಕ್ಷಿವಾಹನ ನಮ್ಮ ಪುರಂದರ ವಿಠಲ.