ಕೀರ್ತನೆ - 861     
 
ಮರವಿದ್ದರೇನಯ್ಯ ನೆರಳಿಲ್ಲದನಕ ನೆರಳಿದ್ದರೇನಯ್ಯ ನೀರಿಲ್ಲದನಕ ಮನವಿದ್ದರೇನಯ್ಯ ಜ್ಞಾನವಿಲ್ಲದನಕ ತನುವಿದ್ದರೇನಯ್ಯ ಪುರಂದರವಿಠಲನ ನೆನೆ ನೆನೆದು ಊಳಿಗವ ಮಾಡದನಕ.