ಕೀರ್ತನೆ - 860     
 
ತುಲಸಿಯಿರಲು ತುರುಚಿಯನು ತರುವಿರೊ ಗಂಗೆಯಿರಲು ತೋಡಿದ ಕೂಪದಿ ಪಾನವ ಮಾಡಿದೆ ರಾಜಹಂಸವಿರಲು ಕೋಯೆಂದು ಕೂಗುವ ಕೋಳಿಗೆ ಹಾಲೆರೆದೆ ಬಾವನ್ನವಿರಲು ಬೇಲಿಯ ನೆಳಲೊಳೊರಗಿದೆ ತಾಯಿಯ ಮಾರಿ ತೊತ್ತನು ತರುವ ಮಾನವನಂತೆ ಪುರಂದರವಿಠಲ ನೀನಿರಲನ್ಯತ್ರ ದೈವಂಗಳ ಎಣಿಸಿದೆನೊ.