ಕೀರ್ತನೆ - 858     
 
ಯಾರು ಮುನಿದು ನಮಗೇನು ಮಾಡುವರಯ್ಯ ಯಾರು ಒಲಿದು ನಮಗೇನು ಕೊಡುವರಯ್ಯ ಕೊಡಬೇಡ ನಮ್ಮೊಡಲಿಗೆ ತುಸುವನು ಇಡಬೇಡ ಈಯಲು ಬೇಡ ನಮ್ಮ ಶುನಕಗೆ ತಳಗಿಯ ಆನೆಯ ಮೇಲೆ ಬಪ್ಪನ ಶ್ವಾನ ಕಚ್ಚಲು ಬಲ್ಲುದೆ ದೀನನಾಥ ಪುರಂದರ ವಿಠಲ ನಮಗುಳ್ಳತನಕ.