ಕೀರ್ತನೆ - 857     
 
ಆರು ಮುನಿದು ನಿಮಗೆ ಏನು ಮಾಡುವರಯ್ಯ ಊರು ಒಲಿದು ನಮಗೇನ ಮಾಡುವುದಯ್ಯ ಕೊಡಬೇಡ ತಮ್ಮೊಡಲಿಗೆ ತುಸುವನು ಇಡಬೇಡ ನಮ್ಮ ಶುನಕಗೆ ತಳಿಗಿಯನು ಆನೆಯ ಬಪ್ಪನ ಶ್ವಾನ ಕಚ್ಚಲು ಬಲ್ಲುದೆ? ದೀನ ನಾಥ ನಮ್ಮ ಪುರಂದರವಿಠಲ ಉಳ್ಳನಕ ಆರು ಮುನಿದು ನಿಮಗೆ ಏನು ಮಾಡುವರಯ್ಯ