ಕೀರ್ತನೆ - 856     
 
ನೋಡಿದರೆನ್ನೊಡೆಯನ ನೋಡುವೆ ಪಾಡಿದರೆನ್ನೊಡೆಯನ ಪಾಡುವೆ ಬೇಡಿದರೆನ್ನೊಡೆಯನ ಬೇಡುವೆ ಕಾಡಿದರೆನ್ನೊಡೆಯನ ಕಾಡುವೆ ಒಡಯಗೆ ಒಡಲನು ತೋರುವೆ ಎನ್ನ ಬಡತನದ ಬಿನ್ನಹವ ಮಾಡುವೆ ಒಡೆಯ ಶ್ರೀಪುರಂದರವಿಠಲನ ಅಡಿಗಳ ಸಾರೆ ಬದುಕುವೆ ಸೇರಿ ಬದುಕುವೆ.