ಕೀರ್ತನೆ - 854     
 
ಜಗದಂತಾರ್ಯಮಿ ನೀನು ನಿನ್ನ ಬಟ್ಟಬಯಲೆಂದು ಬಗೆವವನು ಜಗದೊಳಗೆ ಬ್ರಹ್ಮಹತ್ಯಾಕಾರಿ ಅಗಣಿತ ಗುಣ ನೀನು ನಿನ್ನ ಗುಣಗಳಿಷ್ಟೆಂದು ಬಗೆವವನು ಜಗದೊಳಗೆ ಸ್ವರ್ಣಸ್ತೇಯಿ ಜಗದೊಡೆಯ ನೀನಿರಲು ಅನ್ಯದೇವನು ಒಡೆಯನೆಂದು ಬಗೆವವನು ಜಗದೊಳಗೆ ಮದ್ಯಪಾನಿ ಜಗದ ತಂದೆ ನೀನು ನಿನ್ನ ದಾಸನೆಂದೆನಿಸಿದೆ ನೀನೇ ತಾನೆಂದು ಬಗೆವವನೆ ಜಗದೊಳಗೆ ಗುರುತಲ್ಪಗಾಮಿ ಅವರ ಸಾಕ್ಷಿಯೋಗದಿಂದಲಿ ಇಹ ಜನರು ಜಗದೊಳಗೆ ಮುಖ್ಯ ಪಂಚಮಹಾಪಾತಕರು ಅದು ಕಾರಣದಿಂದ ನೀ ನಿತ್ಯ ನೀಸತ್ಯ ನೀ ಬಲ ನೀ ಅಗಣಿತ ಗುಣನಿಲಯ ನೀ ಸಕಲಸುಖಕಾರಣದಿಂದ ನಂಬಿದೆ ನೀ ಸಲಹಯ್ಯ ಪುರಂದರವಿಠಲ.