ಕೀರ್ತನೆ - 853     
 
ಮಾತಾಪಿತರು ನಿನಗಂದೇ ಮಾರಿದರೆನ್ನ | ನೀತವೆ ನೀ ಎನ್ನ ಸಲಹದಿದ್ದರೆ ದೇವ । ಏತಕೆ ಭಕುತವತ್ಸಲನೆಂದಿನಿಸಿದೆ? । ನಾ ತಡೆಯನು ನಿನ್ನ ಬಿರುದಿಗಂಜುವನಲ್ಲ | ಸಾತ್ವಿಕ ದೈವವೆ ಸಲಹೋ ಎನ್ನನು ವಿ (ಪ್ರ) । ಖ್ಯಾತ ಮೂರುತಿ ಆದ್ಯ ಪುರಂದರವಿಠಲ.