ಕೀರ್ತನೆ - 849     
 
ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ ನಿನ್ನನೆ ಬೇಡಿ ಬೇಸರಿಸುವೆ ರಂಗಯ್ಯ | ನಿನ್ನ ಕಾಲಪಿಡಿವೆ ನಿನ್ನ ಹಾರಯಿಸುವೆ | ನಿನ್ನ ತಂಬುಲಕೆ ಕೈಯಾನುವೆ ರಂಗಯ್ಯ | ನಿನ್ನಂತೆ ಸಾಕಬಲ್ಲ ದೇವ ಉಂಟೆ ಸ್ವಾಮಿ | ನಿನ್ನಾಣೆ ಪುರಂದರವಿಠಲರಾಯ