ಕೀರ್ತನೆ - 844     
 
ಜಗವ ಸುತ್ತಿಹುದೆಲ್ಲ ನಿನ್ನ ಮಾಯೆಯಯ್ಯ ನಿನ್ನ ಸುತ್ತಿಹುದೆಲ್ಲ ಎನ್ನ ಮಾಯೆಯಯ್ಯ ಜಗವು ನಿನ್ನೊಳಗೆ ನೀನು ಎನ್ನೊಳಗೆ ಜಗಕೆ ಬಲ್ಲಿದ ನೀನು ನಿನಗೆ ಬಲ್ಲಿದ ನಾನು ಕರಿಯ ಕನ್ನಡಿಯೊಳು ಅಡಗಿಪ್ಪ ತೆರದಿ ನೀನು ಎನ್ನೊಳಡಗಿಪ್ಪೆ ಪುರಂದರವಿಠಲ.