ಕೀರ್ತನೆ - 841     
 
ಶ್ವಾನನ ಕಂಕುಳೊಳಿಟ್ಟು ವಾರಣಾಸಿಗೆ ಪೋದಂತೆ ಮಾನವ ಕೇಳು ಮದ ಮತ್ಸರಗಳ ಬಿಡದೆ ಏನ ಮಾಡಿದರೇನು ವ್ಯರ್ಥವಲ್ಲವೆ? ಜ್ಞಾನಿ ಪುರಂದರವಿಠಲನ ನೆನೆ ಕಾಣೋ ಮರುಳೇ.