ನಿರುಪಾಧಿಕವಾಗಿ ಹರಿಸೇವೆ ಮಾಡಿದ್ಹಾಂಗೆ ।
ನರರ ನೀಕ್ಷಿಸಿಕೊಂಡು ಕುಳ್ಳಿರುವನು ಪಾ ।
ಮರನೊ ಹರಿದಾಸನಲ್ಲ ನರರೊಳು ವಾ |
ನರನೊ ಪರಮಭಕುತಿಯಿಂದ ನರಹರಿ |
ಚರಿತ್ರೆಯ ವರ ಸುಧಾಧಾರೆಯ ।
ಸುರಿಯಬೇಕು ತನ್ನ ಸ್ವರೂಪ ತೋರಗೊಡದೆ ।
ದುರುಳ ಜನಕೆ ದುರಾಚಾರಿಯಂತೆ ತೋರಬೇಕು ಅ |
ವರು ಹೊಗಳುವಂದದಿ ಪೊಗಳುತ್ತಲೆ |
ನರ ಜಾಣನಾದವ ಹಗಲು ಇರುಳು |
ಹರಿದಾಸರ ಚರಣರಜವನ್ನು ಧರಿಸುವ |
ಶಿರಬಾಗಿ ಪರಮಯೋಗ್ಯನಾಗಿ |
ಪರಮ ಭಕುತಿಯಲಿ ಕೈಗೊಂಡು ಎಲೆ |
ಮನವೆ ಇದು ಕಲಿಯುಗದೊಳು ಈ ಭಾಗ್ಯ ದುರ್ಲಭ ।
ಕರುಣಾಕರ ರಂಗ ಪುರಂದರವಿಠಲನೆ |
ಪರಮಪ್ರಿಯನು ಇವನೇ ಹರಿದಾಸನು ಕಾಣೋ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಆರ್ತಭಾವ