ಒಂದು ಪದವ ಪಾಡುತಲದನು |
ಹಿಂದು ಕಳೆದು ಮತ್ತೊಂದು ಪಾಡಲು |
ನೊಂದಕೊಂಬರು ವರ್ಣಾಭಿಮಾನಿಗಳು |
ಸಂದೇಹ ಜ್ಞಾನ ಹರಿದಾಸ ಕಾಣೊ
ಒಂದೆರೆಡು ಸ್ಥಳದಿಂದ ತಿರುಗಿ ಪುಟ್ಟಿಸುವ
ಬಂದು ಉಂಟನು ಸಕಲ ಸೌಖ್ಯಂಗಳ
ಇಂದಿರೇಶನು ಇವಗೆ ಇದೇ ಕ್ಲುಪ್ತ ಮಾಡಿಪ್ಪ |
ಮಂದಮನವೇ ಕೇಳು ಮದಡನಾಗಿ ನಾ ।
ನಂದ ಮಾತುಗಳೆಲ್ಲ ತಾರದೆ ನಮ್ಮ |
ಕಂದರ್ಪನಯ್ಯಗೆ ದೂರನಾದೀ ಕಂಡ್ಯ |
ವಂದಿಸಿ ನಿನಗೆ ಬೇಡಿಕೊಂಬೆನು |
ಮಂದರಧರ ಶ್ರೀ ಪುರಂದರವಿಠಲನ |
ಹೊಂದಿ ಸಂಸಾರ ದುಃಖಕಳೆದು ಮುಕ್ತನಾಗೊ