ಉದಯಕಾಲದಲೆದ್ದು ಮುದದಿಂದ ಹರಿನಾಮ ।
ಒದಗಿ ಆರತನಾಗಿ ವದನದಿ ಕೊಂಡಾಡಿ |
ವಿಧಿಪೂರ್ವಕವಾಗಿ ಸ್ನಾನಾದಿಕರ್ಮ ಮುಗಿಸಿ |
ಬುಧರಲ್ಲಿಗೆ ಪೋಗಿ ಕಥಾಶ್ರವಣ ಮಾಡಿ |
ಅದರ ತರುವಾಯ ಉದರಕೆ ಸಲುವಾಗಿ
ಸಾಧುಗಳ ಶುದ್ಧವೃತ್ತಿಯ ಮಾಡಿ ।
ಇದ್ದನಿತರೊಳು ಸಾಕ್ಷಿಭೂತನಾಗಿ |
ಮೆದ್ದು ಸತ್ಕಾಲವನ್ನು ಕಳೆಯಬೇಕು |
ಪದ್ಧತಿ ತಪ್ಪದಂತೆ ಈ ಧರೆಯೊಳಗೆ ಹೀ |
ಗಿದ್ದವನೇ ನಿಜದಾಸನು ಕಾಣೋ |
ಮುದ್ದು ಮೋಹನರಂಗ ಪುರಂದರವಿಠಲಗೆ
ಮುದ್ದಾಗುವವನೇ ನಿಜದಾಸನು ಸಿದ್ಧ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಆರ್ತಭಾವ