ಕೀರ್ತನೆ - 834     
 
ಮನವೇ ಆಲೈಸಿಕೇಳು ಬಿನ್ನೈಸುವೆನು ನಿನಗೆ 1 ಚಿನುಮಯ ಮೂರ್ತಿಯ ಘನಗುಣನಾಮ ಕೀ । ರ್ತನ ಮಾಳ್ವ ಬಗೆಯನು ನಿನಗೆ ತಿಳಿಸುವೆನು | ಘನ ಮಹಿಮ ನಾರಾಯಣನ ಅಮಿತ ಅದ್ಭುತಶಕ್ತಿ | ಅನುಭವಕೆ ತಂದುಕೊಂಡು ಸ್ತುತಿಸುವುದು | ಮನ ಮೊದಲಾದ ಸರ್ವೇಂದ್ರಿಯಂಗಳ ಅ | ವನ ಪಾದದಲ್ಲಿಟ್ಟು ಕೀರ್ತನೆಗೈಯ್ಯೊ ಮನವೆ । ನಿನಗೆ ಮುಖ್ಯಗತಿಗೆ ಸಾಧನವೆಂದು ಸಾರಿದೆ | ಅನುಮಾನಮಾಡೆ ಸಲ್ಲ ಎಂದೆಂದಿಗೂ । ಬಿನುಗು ದೈವಂಗಳ ಕಾಲಿಲಿ ಒದ್ದು ಮಧ್ವ | ಮುನಿ ಮತದಲ್ಲಿ ಬದ್ಧ ದೀಕ್ಷಿತನಾಗು ಕು | ಜನರ ನೆರಹಿಕೊಂಡು ಕುಚೇಷ್ಟೆ ಕತೆ ಪೇಳಿ | ಘನ ಅಂಧಂತಮಸಿನೊಳು ಬೀಳದಿರು | ವನಜಭವಾಂಡದೊಳು ಹರಿದಾಸತ್ವ ದೀಕ್ಷೆ | ಯನು ಬಲು ಬಲು ಕಷ್ಟ ಕಷ್ಟವೆಂದು ಕಾಣೋ । ಮನುಜಾಧಮಗಿದು ಸುಲಭವಲ್ಲವೊ ಪ್ರಾಣಿ ಇನಿತು । ಇದರೊಳಗೆ ತ್ರಿವಿಧಬಗೆಯುಂಟು | ಗುಣವಂತನಾಗಿ ನೀನು ಕಾಲಕ್ರಮಣ ಮಾಡು | ಅನುದಿನದಲ್ಲಿ ಹರಿಸೇವೆಗೆ ವಿಮುಖನಾಗದೆ | ತನುವುಬ್ಬಿ ರೋಮಾಂಚನಾನಂದ ಬಾಷ್ಪದಿ ಗಾನ । ವನು ಮಾಡು ಘನಜ್ಞಾನ ಪುಟ್ಟುವದು ಅನಿಮಿಷೇ ಶನ ಪ್ರೀತಿ ದಿನದಿನಕೆ ವೆಗ್ಗಳವಾಗುವುದು । ನಿನಗೆ ಪೇಳಿದ ಶುದ್ಧ ದಾಸಭಾವವಿದನು । ಮನಸಿಗೆ ತಂದುಕೊಂಡು ಜ್ಞಾನಿಯಾಗೊ ಗುಣ | ಗಣಾಂಬುಧಿ ನಮ್ಮ ಪುರಂದರವಿಠಲ | ಅನುಸಾರಿಯಾಗಿ ತಾನು ಹಿಂದೆ ತಿರುಗುತ್ತಿಪ್ಪ