ಒಂದು ಪಾಡುತ ಅದನು ಹಿಂದುಗಳೆದು ಮ - ।
ತ್ತೊಂದು ಪಾಡಲು ನೊಂದುಕೊಂಬರು ವರ್ಣಾಭಿಮಾನಿಗಳು
ಸಂದೇಹ ಜ್ಞಾನವುಳ್ಳ ಹರಿದಾಸನಿವ ಕಾಣೋ ।
ಒಂದು ಎರಡು ಸ್ಥಳದಿಂದ ತಿರುಗಿ ತಿರುಗಿ ।
ಬಂದು ಪುಟ್ಟುವನೊ ನಾನಾ ಬಗೆಯ ಸುಖ ।
ಇಂದಿರೇಶ ಇವಗೆ ಇದೆ ಕ್ಲಪ್ತ ಮಾಡಿಪ್ಪ |
ಮಂದಮಾನವ ಕೇಳೋ ಮರುಳನಾಗಿ ನೀನು ನಾ
ನೆಂದ ವಚನ ಮನಕೆ ತಾರದೆ ನಮ್ಮ |
ಕಂದರ್ಪಜನಕಗೆ ದೂರನಾದೆ ಕಾಣೋ ।
ವಂದಿಸಿ ನಾನಿನಗೆ ಬೇಡಿಕೊಂಬೆನು ಹೀಗೆ !
ಮಂದರಧರ ಸಿರಿ ಪುರಂದರವಿಠಲನ ।
ಪೊಂದಿ ಸಂಸಾರದಿಂದ ಮುಕುತನಾಗೊ