ನಿರುಪಾಧಿಕವಾಗಿ ಹರಿಸೇವೆ ಮಾಳ್ಪುದಕೆ
ನರರ ನಿರೀಕ್ಷಿಸಿಕೊಂಡು ಕುಳ್ಳಿರುವ-ಪಾ-
ಮರ ಹರಿದಾಸನು ಅವನಲ್ಲ |
ನರವಾನರ ಕಾಣೋ ಪರಮ ಭಕುತಿಯಿಂದ |
ನರಹರಿಯ ಚರಿತೆಯ ವರಸುಧಾರಸ ಸುಖ ।
ಸುರಿಯಬೇಕೋ ತನ್ನೊಳುತಾನೆ ಗುಪ್ತದಿ |
ಇರಬೇಕ ಅರಜಾಣನಾದವ ಹಗಲು ಇರುಳು ತಾನು |
ದುರುಳ ಜನಕೆ ದುರಾಚರಿಯೆಂಬ ಹಾಗಾ- |
ಚರಿಸಬೇಕು ಅವರ ಪೋಗಾಡುವಂದದಲಿ |
ಅರಜಾಣನಾದವ ಹಗಲು ಇರುಳು ತಾನು |
ಹರಿದಾಸರ ಚರಣರಜವನು ಧರಿಸುವ |
ಶಿರಬಾಗಿ ಪರಮಯೋಗ್ಯನಾಗಿ ಭಕುತಿಕೈಕೊಂಬನು |
ವರಕಲಿಯುಗದಲಿಂಥವರೇ ದುರ್ಲಬರು ।
ಕರುಣಾಕರ ಸಿರಿಪುರಂದರವಿಠಲಗೆ
ಪರಮಪ್ರಿಯರಿವರೇ ಹರಿದಾಸರು ಕಾಣೋ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಆರ್ತಭಾವ