ಉದಯಕಾಲದಲೆದ್ದು ಮುದದಿಂದ ಹರಿನಾಮ ।
ಒದಗಿ ಆರತನಾಗಿ ವದನದಿ ಕೊಂಡಾಡಿ |
ವಿಧಿ ಪೂರ್ವಕ ಸ್ನಾನವ ಮಾಡಿ ಕರ್ಮವಮುಗಿಸಿ ನಿತ್ಯ |
ಬುಧರಲ್ಲಿಗೆ ಪೋಗಿ ಸತ್ಕಥಾಶ್ರವಣವನು ।
ಹೃದಯದೊಳಗೆ ನಿಲಿಸಿ ಉದರಕೋಸುಗವಾಗಿ ।
ಸಾಧುಗಳ ಮನೆಯಲಿ ಶುದ್ಧವೃತ್ತಿಯ ಮಾಡಿ |
ಇದ್ದನಿತರೊಳು ಸಾಕ್ಷೀಭೂತದಿಂದ ಮೆದ್ದು ।
ಸತಿಸುತರೊಡನೆ ಮಮತಾರಹಿತನಾಗಿ ಇದ್ದು |
ಸತುಕಾಲವನು ಕಳೆಯಬೇಕು ಹೀಗೆ ಪ-1
ದ್ಧತಿ ತಪ್ಪದಂತೆ ಧರೆಯೊಳು ಸತತ ಚರಿಸಲು |
ಮುದ್ದು-ಮೋಹನ ರಂಗ ಪುರಂದರವಿಠಲನ ।
ಗದ್ದುಗೆ ಬಳಿಯಲಿರುವ ಮುದ್ದು ದಾಸನು ಒಯ್ವನು
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಆರ್ತಭಾವ