ಕೀರ್ತನೆ - 825     
 
ಎನಗೆ ಶ್ರೀಹರಿಯಲ್ಲಿ ಭಕುತಿಲ್ಲವೆಂಬದು ಇದೆ ಕುರಹು । ಧನಧಾನ್ಯದಾಕಾಂಕ್ಷೆ ಇದೇ ಕುರುಹು । ವನಿತೆ ಸುತರ ಭ್ರಾಂತಿ ಇದೆ ಕುರುಹು । ಪುರಂದುರವಿಠಲನ ದಾಸನೆನಿಸಿಕೊಂಡು | ಪರರಿಗಾಲ್ಪರಿವದೆ ಇದೇ ಕುರುಹು