ಕೀರ್ತನೆ - 822     
 
ನರಲೋಕದ ಸಿರಿ ಹೇಯವೆಂಬೋದುಗಡ ಸುರಲೋಕದ ಸಿರಿ ಹೇಯವೆಂಬೋದುಗಡ | ಅತಳಲೋಕದ ಸಿರಿಯು ಹೇಯವೆಂಬೋದು ಗಡ | ಸತ್ಯಲೋಕದ ಸಿರಿ ಹೇಮವೆಂಬೋದು ಗಡ | ಯಕುತಿ ಪಾಥೇಯವದು ಹೇಮವೆಂಬೋದು ಗಡ | ಯೋಗಪದ್ಧತಿಯನ್ನು ಹೇಯವೆಂಬರು ಗಡ | ಪುರಂದರವಿಠಲನ ಶ್ರೀ ಪಾದಪದುಮದ । ಬಂಡುಂಡು ಬದುಕುವ ಮಧುಕರರೆನಿಪರು