ಕೀರ್ತನೆ - 816     
 
ನರಲೋಕದ ಸುಖ ಹೇಯವೆಂಬರು ಗಡ । ಸುರಲೋಕದ ಸುಖ ಹೇಯವೆಂಬರು ಗಡ ಅತಲಲೋಕದ ಸಿರಿ ಹೇಯವೆಂಬರು ಗಡ | ಸತ್ಯ ಲೋಕದ ಪದವಿ ಹೇಯವೆಂಬರು ಗಡ | ಮುಕುತಿ ಪಥವನದು ಹೇಯವೆಂಬರು ಗಡ | ಪರಂದರವಿಠಲನ ಸಿರಿಪಾದ ಪದುಮದಲುಂಡುಂಡು | ಬದುಕುವ ಮಧುಕರರು ಆವಾಗಲು