ಕೀರ್ತನೆ - 815     
 
ಹರಿನಿನ್ನ ಭಕ್ತನೆನಿಸಿಕೊಂಡವ ಭಂಗವ ಪಡಲು ಬೇಕೇ ದಿನ-ಪ್ರತಿದಿನದಲ್ಲಿ ಅನ್ನ ವಸ್ತ್ರ ಉದಕಗಳ ಕಾಣದಿರಬೇಕೆ? ಬೆನ್ನಟ್ಟಿ ರೋಗಗಳು ಹತ್ತಿರಬೇಕೇ? ತನ್ನವರ ಕೈಯಿಂದ ಚಿಹಿ ಎನಸಿಕೇಳಬೇಕೆ? ಎನ್ನ ಈಪವರಿಯಲಿ ಮಾಡಿದ ಬಗೆಯೇನೊ ಪುರಂದರವಿಠಲ.