ಕೀರ್ತನೆ - 814     
 
ಹುಟ್ಟುವ ಭೀತಿ ಹೊಂದುವ ಭೀತಿ ವಿಠಲನಂಘ್ರಿಯ ನೆನೆಯದವರಿಗೆ | ಕಾಲನ ಭೀತಿ ಕರ್ಮದ ಭೀತಿ ಗೋಪಾಲನ ದಾಸನಾಗದವನಿಗೆ ಅರಿಷಡ್ವರ್ಗದ ಮಹಾಭೀತಿ ಶ್ರೀ ಹರಿನಾಮವನುಚ್ಚರಿಸದವಗೆ ಚೆಲುವ ಪುರಂದರವಿಠಲನ್ನ ಪೂಜಿಸದವರಿಗೆ.