ಪುಟ್ಟುವ ಭೀತಿ ಪೊಂದುವ ಭೀತಿ।
ವಿಠಲನಂಘ್ರಿಯ ನೆನೆಯದವರಿಗೆ||
ಪಾಪದ ಭೀತಿ, ನಿರಯದ ಭೀತಿ ಶ್ರೀ
ಗೋಪಾಲನ ದಾಸನಾಗದವರಿಗೆ
ಕಾಲನ ಭೀತಿ ಕರ್ಮದ ಭೀತಿ ಶ್ರೀ-
ಲೋಲನ ಒಮ್ಮೆ ನೆನೆಯದವಗೆ ||
ಅತಳದಲ್ಲಿರಿಸೊ, ಸುತಳದಲ್ಲಿರಿಸೊ |
ತಳಾತಳ ಪಾತಾಳದಲ್ಲಿರಿಸೊ ॥
ಯೋನಿಯೊಳಿರಿಸೊ ಮತ್ತಾ ವಿಯೋನಿಯಲಿರಿಸೊ
ಎಲ್ಲರಿಸಿದರೂ ನಾ ಹೋಹೆನಯ್ಯ ।
ಎಂತೆಂತು ನಡೆದು ನಡಸಿಕೊಂಬುವೆ
ಅಂತಂತು ನಡೆಯುವೆ ಶ್ರೀ ಪುರಂದರವಿಠಲ.
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಆರ್ತಭಾವ