ಕೀರ್ತನೆ - 811     
 
ಮಂದರಧರನ ಮೊರೆಹೊಕ್ಕು ಬದುಕುವೆನು । ಇಂದು ನಾಳೆ ನಾಡಿದ್ದೆಂಬ । ಮಂದಮತಿಗಿನ್ನೇನೆಂಬೆ| ಹಿಂದೆ ಮುಂದೆ ಸುತ್ತಿ ಬಪ್ಪ ಮೃತ್ಯು ವಿಚಾರಿಸದೆ | ತಂದು ತಂದು ಕೆಡಹುತಲಿದೆ ಭವಾಂಬುಧಿಯಲ್ಲಿ | ತಂದೆ ನಿಂದು ಪರಿಯಂತ ಈ ಬೆಂದ ಮನ ದೀಪ್ತಿಯ | ತಂದೆ ಕರುಣಿಸೆಲೆ ಪುರಂದರವಿಠಲ ವಿಭವೆ