ಕೀರ್ತನೆ - 807     
 
ಹುಟ್ಟುವ ಭೀತಿ ಹೊಂದುವ ಭೀತಿ ವಿಠಲನಂಘ್ರಿಯ ನೆನೆಯದವಗೆ | ಕಾಲನ ಭೀತಿ ಕರ್ಮದಭೀತಿ ಗೋಪಾಲನದಾಸನಾಗದವಗೆ ಅರಿಷಡ್ವರ್ಗದ ಮಹಾಭೀತಿ ಹರಿನಾಮ ಉಚ್ಚರಿಸದವಗೆ | ಹಲವು ಮಾತಿನಲೇನು ಹಲವು ಭೀತಿ ನಮ್ಮ ಪುರಂದರ ವಿಠಲನ ಪೂಜಿಸದವನಿಗೆ