ಕೀರ್ತನೆ - 806     
 
ತಂಬೂರಿ ಮೀಟಿದವ ಭವಾಬ್ಧಿಯ ದಾಟಿದವ ತಾಳವ ತಟ್ಟಿದವ ಸುರರೊಳು ಸೇರಿದವ ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟದವ ಗಾಯನ ಮಾಡಿದವ ಹರಿಮೂರ್ತಿಯ ನೋಡಿದವ ಪುರಂದರವಿಠಲನ ನೋಡಿದವ ವೈಕುಂಠಕೋಡಿದವ.