ಕೀರ್ತನೆ - 803     
 
ನಿನ್ನ ಭಕ್ತರೆಂದೆನಿಸಿದ ಜನರು ಭಂಗಪಡಲುಬೇಕು ದಿನಂಪ್ರತಿ ದೀನ ಅನ್ನ ಉದಕ ವಸ್ತುಗಳು ಕಾಣದೆ ಇರಬೇಕು ಬೆನ್ನತ್ತಿ ರೋಗಗಳು ಹತ್ತಿ ಇರಲು ಬೇಕು ತನ್ನವರ ಕೈಯಿಂದ ಛೀ ಎನಿಸಿಕೊಳಬೇಕು ಪನ್ನಗಶಯನ ಶ್ರೀ ಪುರಂದರವಿಠಲ.