ಕೀರ್ತನೆ - 802     
 
ಹರಿ ನಿನ್ನ ಭಕ್ತನೆನಿಸಿಕೊಂಡವ ಭಂಗ ಬಡಲುಬೇಕು ಹರಿ ನಿನ್ನ ಭಕ್ತನೆನಸಿಕೊಂಡವ ದಿನ-ಪ್ರತಿದಿನದಲ್ಲಿ ಅನ್ನ ಉದಕಗಳ ಕಾಣದಿರಬೇಕು ಬೆನ್ನಟ್ಟಿರೋಗಗಳು ಹತ್ತಿಕೊಂಡಿರಬೇಕು ತನ್ನವರ ಕೈಯಿಂದ ಚಿಹಿ ಎನಿಸಿಕೊಳ್ಳಬೇಕು ಎನ್ನ ಈ ಪರಿಯ ಮಾಡಿದ ಬಗೆ ಏನೋ ಪುರಂದರವಿಠಲ.