ಕೀರ್ತನೆ - 799     
 
ಮನೆಯೆಂಬಾಶೆಯು ಎನ್ನ ಮುಂದುಗೆಡಿಸುತ್ತಿದೆ ಮನೆವಾರ್ತೆಯು ಎನ್ನ ಭಂಗಪಡಿಸುತಿದೆ | ವನಿತೆ ಸುತರಾಶೆಯು ಎನ್ನ ದೈನ್ಯ ಬಡಿಸುತಿದೆ । ಇನೆತಾಶೆಯೊಳಿದ್ದು ಬುದ್ಧಿಯು ನಿನ್ನಲಿ ನಿಲುವಂತೆ ಮಾಡೋ ಶ್ರೀ ಪುರಂದರವಿಠಲ.