ಕೀರ್ತನೆ - 798     
 
ತಂದೆ, ನೀ ತಂದೆ-ನಾ ಬಂದೆ ನಿನ್ನ ಹಿಂದೆ ಕಾಮದಲಿ ನೀ ತಂದೆ ಕ್ರೋಧದಲಿ ನೀ ತಂದೆ ತಾಮಸ ದುರ್ಯೋನಿಯಲಿ ನೀ ತಂದೆ ನಾ ಬಂದೆ | ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ ಒಂದಿ ಎಂಬತ್ನಾಲ್ಕು ಲಕ್ಷ ಯೋನಿಗಳ ತಂದೆ ನೀ ತಂದೆ, ನಾ ಬಂದೆ ನಿನ್ನ ಹಿಂದೆ ಹಿಂದಿನ ಜನ್ಮವು ಹೇಗಾದರಾಗಲಿ ಮುಂದೆನ್ನ ಸಲಹೊ ಶ್ರೀ ಪುರಂದರವಿಠಲ.