ಕೀರ್ತನೆ - 797     
 
ಎನಗೆ ನಿನ್ನಲ್ಲಿ ಭಕ್ತಿ ಇರಲಿ ಇಲ್ಲದಿರಲಿ ಹರಿದಾಸನೆಂದೆನ್ನ ಕರೆವರು ಸಜ್ಜನರು ಹರಿದಾಸನ್ನ ಯಾಮ್ಯರು ಎಳೆವರೆಂಬ ಅಪಕೀರ್ತಿಯ ಪರಿಹರಿಸಿಕೊಳ್ಳೋ ಶ್ರೀಪುರಂದರ ವಿಠಲ.