ಕೀರ್ತನೆ - 794     
 
ಬಡವರೊಳಗೆ ಎನ್ನಿಂದಾರು ಬಡವರಿಲ್ಲ ಕೊಡುವರೊಳಗೆ ನಿನ್ನಿಂದಾರು ಕೊಡುವರಿಲ್ಲ ದೃಢಭಕ್ತಿ ಎನಗೆ ನಿನ್ನಲ್ಲಿಯೆ ಕಲ್ಪಿಸಿ! ಬಿಡದೆ ಸಲಹಯ್ಯ ಶ್ರೀ ಪುರಂದರವಿಠಲ.