ಕೀರ್ತನೆ - 785     
 
ಒಂದಪರಾಧವೆ ಹರಿಹರಿ | ಎರಡಪರಾಧವೆ ಹರಹರಿ | ಒಂದೊಂದು ಪರ್ವತ ಎಂಥದ್ದೋ ದೇವ | ಒಂದನಂತ ಸಾಸಿರ ಲಕ್ಷ ಕೋಟಿ ಅಪರಾಧ । ಒಂದಾಗಿ ನೋಡದೆ ಹರಿ ನೀ ಹಿಂದಿಕ್ಕಿ ಕೊಂಡು ಕಾದೆ ಹರಿಹರಿ ಎಂದೆಂದು ನಿನಗ ನಾ ಸಲೆ ದೂರ ಹೋದೆ ಪು– ರಂದರವಿಠಲ ಕೃಪಾಸಿಂಧುವೆ ನೀನಲ್ಲದುಂಟೆ