ಕೀರ್ತನೆ - 777     
 
ಒಂದಪರಾಧವೆ ಹರಿಹರಿ, ಎರಡಪರಾಧವೆ ಹರಿಹರಿ ಒಂದೊಂದು ಪರ್ವತದಂತಹದೋ ದೇವಾ ಒಂದನಂತ ಸಾಸಿರಲಕ್ಷ ಕೋಟಿ ಅಪರಾಧ ಒಂದಾಗಿ ನೋಡದೆ ಹರಿ ನೀ ಹಿಂದಿಕ್ಕಿಕೊಂಡು ಕಾದೆ ಎಂದೆಂದೂ ನಿನಗೆ ನಾ ಸಲೆ ದೂರದೂರ ಹೋದೆ ಪುರಂದರವಿಠಲ ಕೃಪಾಸಿಂಧುವೆ ನೀನಲ್ಲದುಂಟೆ