ಸ್ವರ್ಗ ಮರ್ತ್ಯ ಪಾತಾಳಗಳಲ್ಲಿ ತಿರುತಿರುಗಿ ಬಳಲಿದೆನು |
ದೇಹಯೋಗ ವಿಯೋಗ ಹಮ್ಮು
ಮಮತೆಯಿಂದಲಿ ಬಳಲಿದೆನು |
ಯಮನ ಪಟ್ಟಣಕೆ ಎಂಬಂತೆಂಟುಸಾಸಿರ ಬಾರಿ |
ಹೋಗಿ ಬಂದು ಬಂದು ಬಳಲಿದೆನಯ್ಯ |
ಅಲ್ಲಿ ಯಮನಾಳ್ಗಳಿಂದ ನೊಂದೆನು ನಾನಲ್ಲಿ |
ವೈತರಣಿಯಿಂದ ಬಳಲಿದೆನು ನಾನಲ್ಲಿ |
ನರಕಭಾಜನನಾಗಿ ಹೋದೆನೊ ಪುರಂದರವಿಠಲ |
ಇನ್ನು ಆರೆ ಆರೆನಯ್ಯ ಕರುಣಿಸು ಕರುಣಿಸಯ್ಯ |
ಕರುಣಕರನೆದಮ್ಮಯ್ಯ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಆರ್ತಭಾವ