ಕೀರ್ತನೆ - 765     
 
ಇಂದಿನ ದಿನವೇ ಶುಭದಿನವು । ಇಂದಿನ ವಾರವೆ ಶುಭವಾರ | ಇಂದಿನ ತಾರೆಯೆ ಶುಭತಾರೆ | ಇಂದಿನ ಯೋಗವೆ ಶುಭಯೋಗ । ಇಂದಿನ ಕರಣವೆ ಶುಭಕರಣ | ಇಂದು ಪುರಂದರವಿಠಲರಾಯನ | ಸಂದರುಶನ ಫಲವೆಮಗಾಯಿತ್ತು.