ಕೀರ್ತನೆ - 759     
 
ಅಂಬುಧಿ ತೊಟ್ಟಲಾಗೆ ಆಲದೆಲೆಯಾಗಿ | ಅನಂತ ಮೃದುಹಾಸಿಗೆಯಾಗಿ ಅಯ್ಯ । ವೇದ ನೇಣುಗಳಾ ವೇದಾಂತದೇವಿಯರು | ಪಾಡಿ ಮುದ್ದಾಡಿ ತೂಗುವರಾಗಿ । ಆನಂದ ಗೋಪಿಯರು ಇನ್ನೆಂಥ ಪರಮಾನಂದವನುಂಬರೊ | ಪುರಂದರವಿಠಲ ಬಲ್ಲನಯ್ಯ ।