ಕೀರ್ತನೆ - 757     
 
ದೇಹವ ಮಾಡಿದೆ ದೇಹಿಯ ಮಾಡಿದೆ | ದೇಹ ಸಂಬಂಧವ ಮಾಡಿದೆ ಕೂಡಿದೆ | ದೇಹವು ತಾನೆಂಬ ಭ್ರಮೆಯನು ಮಾಡಿದೆ । ಶ್ರೀ ಹರಿ ವೃಥಾಪ್ರಲಾಪ । ದೇವನೀನಾದೆಯೆಲೊ ದೇಹಿ ನಾನಾದೆನು । ಶ್ರೀಧರನಾಮಕ ಪುರಂದರವಿಠಲ |