ಕೀರ್ತನೆ - 754     
 
ಜೋ ಜೋ ಜೋ ಎನ್ನ ಸಿರಿಹರಿಮೂರುತಿ । ಜೋ ಜೋ ಜೋ ಎನ್ನ ಕಂದ ಗೋವಿಂದ | ಜೋ ಜೋ ಜೋ ಎನ್ನ ತಮ್ಮ ದಮ್ಮಯ್ಯ | ಜೋ ಜೋ ಜೋ ಎನ್ನ ಹೊನ್ನುರನ್ನವೇ । ಜೋ ಜೋ ಜೋ ಎನ್ನ ಮರಿಯೆ ಬೊಮ್ಮದ ಮರಿಯೇ । ಜೋ ಜೋ ಜೋ ಎನ್ನ ಸಿರಿಯೆ ಸುರರ ಸಿರಿಯೆ | ಜೋ ಜೋ ಜೋ ಎನ್ನ ಸ್ವಾಮಿ ಸುರರಂತರ್ಯಾಮಿ | ಜೋ ಜೋ ಜೋ ಎನ್ನ ಪುರಂದರವಿಠಲ |