ಅಂಬುಧಿ ತೊಟ್ಟಿಲಾಗಿ ಆಲದೆಲೆಯಾಗಿ ।
ಅನಂತ ಮೃದುಹಾಸಿಗೆಯಾಗಿ ಅಯ್ಯಾ |
ವೇದ ನೇಣುಗಳಾಗಿ ವೇದಾಂತದೇವಿಯರು |
ಪಾಡಿ ಮುದ್ದಾಡಿ ತೂಗುವರಾಗಿ
ಆದಿಪುರುಷನಾತ ಅಜಾತ ಅಜನಪಿತ ಅಂಬುಧಿ ತೊಟ್ಟಿಲಾಗಿ
ಅಗಮ್ಯ ಅಗೋಚರನೆ ಶಿಶುವು ಆಗಿ ಅಯ್ಯಾ |
ಆ ನಂದನರು ಗೋಪಾಲರು |
ಆ ಯೊಶೋದಾದಿ ಗೋಪಿಯರು |
ಇನ್ನೆಂಥ ಪರಮಾನಂದವನುಂಬರೋ ।
ಪುರಂದರವಿಠಲನೊಬ್ಬನೆ ಬಲ್ಲನವ ।
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ದೇವತಾಸ್ತುತಿ