ಕೀರ್ತನೆ - 740     
 
ನಿನ್ನ ನಾಮಭಂಡಾರವ ಕದ್ದ ಕಳ್ಳ (ನು) ನಾನು ನಿನ್ನ ಭಕ್ತಿಯೆಂಬ ಸಂಕೋಲೆಯ ಹಾಕಿ ನಿನ್ನ ದಾಸರ ಕೈಯ್ದೆ ಎನ್ನ ಒಪ್ಪಿಸಿಕೊಟ್ಟು ನಿನ್ನ ಮುದ್ರಿಕೆಯಿಂದ ಗಾಸಿ ಮಾಡಿಸೊ ಕೃಷ್ಣ ನಿನ್ನ ವೈಕುಂಠದುರ್ಗದಲ್ಲಿ ಎನ್ನ ಸೆರೆಯಿಟ್ಟು" ಚೆನ್ನಾಗಿ ಸಲಹೊ ಶ್ರೀ ಪುರಂದರವಿಠಲ.