ಕೀರ್ತನೆ - 739     
 
ಹರಿ ನೀವೊಲಿವಂತೆ ಮಾಡು ಒಲಿದರೆ ತಿರಿವಂತೆ ಮಾಡು ತಿರಿದರೆ ದಾರು ನೀಡದಂತೆ ಮಾಡು ದಾರು ನೀಡಿದರು ಹೊಟ್ಟೆ ತುಂಬದಂತೆ ಮಾಡು ಹೊಟ್ಟೆ ತುಂಬಿದರೆ ಬಟ್ಟೆ ದೊರೆಯದಂತೆ ಮಾಡು ಬಟ್ಟೆ ದೊರೆತರೆ ಇಂಬು ದೊರೆಯದಂತೆ ಮಾಡು ಇಂಬು ದೊರೆಯದಿದ್ದರೆ ರಂಗ ನಿನ್ನ ಪಾದಾರವಿಂದದಲ್ಲಿ ಇಂಬಿಟ್ಟು ಸಲಹೊ ಪರಂದರವಿಠಲ.