ಕೀರ್ತನೆ - 738     
 
ಹರಿ ನೀನೊಲಿವಂತೆ ಮಾಡು ಒಲಿದರೆ ತಿರಿವಂತೆ ಮಾಡು ತಿರಿದರೆ ಆರೂ ನೀಡಿದಂತೆ ಮಾಡು ನೀಡಿದರೆ ಹೊಟ್ಟೆ ತುಂಬಿದರೆ ಬಟ್ಟೆ ದೊರೆಯದಂತೆ ಮಾಡು ಬಟ್ಟೆ ದೊರೆತರೆ ಇಂಬು ದೊರೆಯದಂತೆ ಮಾಡು ಇಂಬು ದೊರೆತರೆ ನಿನ್ನ ಪಾದಾರವಿಂದದಲಿ ಇಂಬುದೋರೋ ಪುರಂದರವಿಠಲ.