ಕೀರ್ತನೆ - 730     
 
ಹರಿನಾಮ ಕೀರ್ತನೆಯ ಭಕುತಿಯಿಂ ಕೇಳ್ವ ಚಿರಸ್ವಭಾವದಲಿ ಕಣ್ಣೊರತೆಯ ತಾಳ್ವ ಹರಿಯಂತೆ ಕೂಗಿ ಸುಜನರೊಳು ಬಾಳ್ವ ದುರಿತ ಗಜಗಳ ಮಂಡೆಯನೇರಿ ಸೀಳ್ವ ಹರುಷಾಮೃತಾಬ್ಧಿಯೊಳು ಇಳಿಮುಳಿಗೇಳ್ವ ಪುರಂದರ ವಿಠಲೇಶನ ಹೊಂದಿ ತಾ ಬಾಳ್ವ,